ನಕಲಿ ಆಧಾರ್ ಮಾಡುವ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ
Sep 01 2024, 01:49 AM ISTನಕಲಿ ದಾಖಲೆ ಸೃಷ್ಟಿಸಿ ಹೊರಗಿನವರಿಗೆ ಆಧಾರ್ ಕಾರ್ಡ್ ಕೊಡುವ ಕೆಲಸ ನಡೆದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಅನೇಕರು ಸೇರಿ ಈ ಕೃತ್ಯದಲ್ಲಿ ತೊಡಗಿದ್ದು, ಇಂಟರ್‌ನೆಟ್ ಕೇಂದ್ರದವರೂ ಇದರಲ್ಲಿ ಭಾಗಿ ಆಗಿದ್ದಾರೆ. ಸ್ಪಂದನಾ ಸೇರಿ ಅನೇಕ ಕಡೆ ಆಧಾರ್ ಕಾರ್ಡ್ ಮಾಡುತ್ತಾರೆ. ಬಾಂಗ್ಲಾ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿ ಜಿಲ್ಲೆಯಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಠಿ ಮಾಡುತ್ತಿದ್ದ ಜಾಲ ಹಾಸನದಲ್ಲಿ ಬಯಲಿಗೆ ಬಂದಿದ್ದು, ಕೂಡಲೇ ಈ ಜಾಲ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅರಕಲಗೂಡು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.