ಆರೋಪ ರುಜುವಾತು ಮಾಡಿದ್ರೆ ಅರಸೀಕೆರೆಯನ್ನೇ ಬಿಡುವೆ
Sep 04 2024, 01:48 AM ISTಕಳೆದ ಚುನಾವಣೆಯಲ್ಲಿ ನಾನು ಆರು ಸಾವಿರ ಮತಗಳನ್ನು ಪಡೆದಿರುವುದನ್ನು ಪ್ರಸ್ತಾಪಿಸಿ, ಇತರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ನಗರಸಭಾ ಅಧ್ಯಕ್ಷ ಸಮೀವುಲ್ಲಾ, ಶ್ರೀ ಜೇನುಕಲ್ ಬೆಟ್ಟವೇಕೆ ಅವರ ಮಸೀದಿಗೆ ಹೋಗಿ ಪ್ರಮಾಣ ಮಾಡೋಣ ರುಜುವಾತು ಮಾಡಿದರೆ ಅರಸೀಕೆರೆಯನ್ನೇ ಬಿಡುವೆ, ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಶಾಸಕರನ್ನೇ ಕೇಳಲಿ ಎಂದು ಕರ್ನಾಟಕ ಹೆದ್ದಾರಿ ನಿಗಮದ ಮಾಜಿ ಅಧ್ಯಕ್ಷ ಜಿವಿಟಿ ಬಸವರಾಜ್ ಸವಾಲು ಹಾಕಿದರು. ಗಂಜಿಗೆರೆಯಿಂದ ಅರಸೀಕೆರೆಯವರೆಗೆ ನನ್ನ ಬಗ್ಗೆ ಒಂದೇ ಒಂದು ನಿರ್ದಿಷ್ಟ ಆರೋಪವನ್ನು ಇವರು ರುಜುವಾತು ಪಡಿಸಿದರೆ ನಾನು ಅರಸೀಕೆರೆಯನ್ನೇ ಬಿಡುತ್ತೇನೆ ಎಂದು ಪುನರುಚ್ಛರಿಸಿದರು.