ಕಿಡ್ನಾಪ್ ಎಫ್ಐಆರ್ ಆಗುವ ಮುನ್ನವೇ ಸತೀಶ್ ಬಾಬು ವಶಕ್ಕೆ: ಸಾ.ರಾ.ಮಹೇಶ್ ಆರೋಪ
May 14 2024, 01:02 AM ISTಸುರೇಶ್ ಬಾಬುವನ್ನು ಕರೆದುಕೊಂಡು ಹೋಗಿದ್ದು ಬೇಕರಿಯೊಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ. ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಈಗ ಡಿಲಿಟ್ ಮಾಡಿ ಕೊಟ್ಟಿದ್ದಾರೆ. ಆದರೆ, ಮತ್ತೊಬ್ಬ ಮೊಬೈಲ್ ವೀಡಿಯೋ ಮಾಡಿ ಅದನ್ನು ಬೇರೊಬ್ಬರಿಗೆ ಕಳುಹಿಸಿದ್ದಾನೆ. ಇಷ್ಟೆಲ್ಲಾ ಸಾಕ್ಷಿಗಳು ನಮ್ಮ ಬಳಿ ಇವೆ. ಇದನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.