ಕಳ್ಳತನವಾಗಿದ್ದ ಸ್ಕೂಟಿ ಸಮೇತ ಆರೋಪಿ ಬಂಧನ
Mar 21 2024, 01:09 AM ISTಗುಳೇದಗುಡ್ಡ: ಗುಳೇದಗುಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ಸಮೇತ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವೇಶ್ವರ ನಗರದ ಆರೋಪಿ ಲಕ್ಷ್ಮಣ ಅಂಬಾಜಿ ಗಣಾಚಾರಿ ಬೈಕ್ ಕಳ್ಳತನ ಮಾಡಿದ್ದ ಆರೋಪಿ. ಈತ ಕಳೆದ 2023ರ ಅಕ್ಟೋಬರ್ 3 ರಂದು ಬಸವೇಶ್ವರ ನಗರದ ಮೆಹಬೂಬಸಾಬ್ ಮಕ್ತುಮಸಾಬ್ ಮುಲ್ಲಾ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಮೆಹಬೂಬ್ ಸಾಬ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.