ಅತ್ತಿಗೆ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಆರೋಪಿ ಪರಾರಿ
Nov 05 2023, 01:15 AM ISTಕನ್ನಡಪ್ರಭ ವಾರ್ತೆ ಹಾನಗಲ್ಲತಾಲೂಕಿನ ಯಳ್ಳೂರು ಗ್ರಾಮದಲ್ಲಿ ಮೈದುನನೇ ತನ್ನ ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದು ತಲೆ ಮರೆಸಿಕೊಂಡ ಘಟನೆ ಶನಿವಾರ ಬೆಳಗಿನಜಾವ ನಡೆದಿದೆ.ಹಾನಗಲ್ಲ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಹೊನ್ನಗೌಡ ಮರಿಗೌಡರ ಪತ್ನಿ ಗೀತಾ (೩೨) ಮಕ್ಕಳಾದ ಅಕುಲಗೌಡ (೧೦), ಅಂಕಿತಾ (೮) ಹಾಗೂ ಈತನ ಸಹೋದರ ಕುಮಾರಗೌಡ ಮರಿಗೌಡರ ವಾಸಿಸುತ್ತಿದ್ದರೆನ್ನಲಾಗಿದೆ.