ನೂರು ಎಫ್ಐಆರ್ ಹಾಕಿದರೂ ಜಗ್ಗುವುದಿಲ್ಲ: ಕೆ.ಎಸ್.ಈಶ್ವರಪ್ಪ
Dec 11 2024, 12:46 AM ISTಶಿವಮೊಗ್ಗ: ವಕ್ಫ್ ವಿಚಾರದಲ್ಲಿ ಸಾಧು-ಸಂತರ ನೇತೃತ್ವದಲ್ಲಿ ದಂಗೆ ಹೇಳುವ ಕಾಲ ಬರುತ್ತದೆ ಎಂದು ಹೇಳಿದ್ದೆ, ನಾನೆಲ್ಲೂ ಕೊಲ್ಲಿ ಎಂದು ಕರೆ ನೀಡಿಲ್ಲ. ಆದರೂ ಕೋಮು ಪ್ರಚೋದಿತ ಭಾಷಣದ ಆರೋಪದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನನಗೆ ಎರಡು ಜಾಮೀನು ರಹಿತ ವಾರೆಂಟ್ ಬಂದಿವೆ. ಹಿಂದುತ್ವವನ್ನು ರಕ್ಷಣೆ ಮಾಡುವ ವಿಚಾರದಲ್ಲಿ ತಮ್ಮ ವಿರುದ್ಧ ಇಂತಹ ನೂರು ಎಫ್ಐಆರ್ ಹಾಕಿದರೂ, ಜಗ್ಗುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.