• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಉಚ್ಛಾಟನೆಗೆ ಬಿಜೆಪಿಯಲ್ಲಿ ಏನೂ ಬೆಲೆ ಇಲ್ಲ: ಕೆ.ಎಸ್‌. ಈಶ್ವರಪ್ಪ

May 31 2024, 02:15 AM IST
ಚಿಕ್ಕಮಗಳೂರು, ಉಚ್ಛಾಟನೆಗೆ ಬಿಜೆಪಿಯಲ್ಲಿ ಏನೂ ಬೆಲೆ ಇಲ್ಲ. ಕಾಂಗ್ರೆಸ್‌ ಸಂಸ್ಕೃತಿ ಬಿಜೆಪಿಯಲ್ಲೂ ಪಾಲನೆ ಆಗ್ತಾ ಇದೆ. ಪಕ್ಷವನ್ನು ಶುದ್ಧೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಸಹಕರಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಕರೆ ನೀಡಿದರು.

ಡಾ.ಧನಂಜಯ ಸರ್ಜಿ ‘ಗುಂಡು’ ಪಾರ್ಟಿ ಬಿಜೆಪಿ ಆಶಯಕ್ಕೇ ಧಕ್ಕೆ: ಕೆ.ಎಸ್.ಈಶ್ವರಪ್ಪ

May 30 2024, 12:50 AM IST
ಡಾ. ಧನಂಜಯ ಸರ್ಜಿ ನೀಡಿದ ಗುಂಡು ಪಾರ್ಟಿಯಲ್ಲಿ ಪಾಲ್ಗೊಂಡವರೇ ಮಾರನೇ ದಿನ ನನಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದು, ತಾವೆಲ್ಲರೂ ರಘುಪತಿ ಭಟ್ ಗೇ ಮತ ಹಾಕುವುದಾಗಿಯೂ ತಿಳಿಸಿದ್ದಾರೆ. ಒಟ್ಟಾರೆ ಬಿಜೆಪಿಯ ಶೇ. 70-80 ರಷ್ಟು ಮಂದಿ ರಘುಪತಿ ಭಟ್ ಗೆ ಮತ ಹಾಕಲಿದ್ದು, ಭಟ್ಟರು ಭಾರೀ ಬಹುಮತದಿಂದ ಗೆಲ್ಲಲಿದ್ದಾರೆ. ಯಾರು ಕೆಜೆಪಿಯಲ್ಲಿದ್ದರೋ ಅವರು ಮಾತ್ರ ಡಾ.ಧನಂಜಯ ಸರ್ಜಿಯವರಿಗೆ ಮತ ಹಾಕಲಿದ್ದಾರೆ.

ಬಿಜೆಪಿ ರಾಷ್ಟ್ರೀಯವಾದದಿಂದ ಜಾತಿವಾದಕ್ಕೆ ತಿರುಗಿದೆ: ಈಶ್ವರಪ್ಪ

May 29 2024, 12:53 AM IST
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದ ಬಿಜೆಪಿ ಈಗ ರಾಷ್ಟ್ರೀಯವಾದದಿಂದ ಲಿಂಗಾಯತ ಜಾತೀಯವಾದದ ಕಡೆ ತಿರುಗುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಹಿಂದೆ ಸುತ್ತುವವರಿಗೆ ಪಕ್ಷದಲ್ಲಿ ನೆಲೆ ಸಿಗುತ್ತಿದೆ. ಜನಸಂಘದ, ಆರ್.ಎಸ್.ಎಸ್. ತಪಸ್ಸು ಈ ಕುಟುಂಬಕ್ಕೆ ಬಲಿಯಾಗಿದೆ ಎಂದು ಆರೋಪಿಸಿದರು.

ಕುಟುಂಬ ರಾಜಕಾರಣದಿಂದ ಬಿಜೆಪಿ ಶುದ್ಧೀಕರಣಗೊಳಿಸಿ: ಮಾಜಿ ಸಚಿವ ಈಶ್ವರಪ್ಪ

May 29 2024, 12:52 AM IST
ಕೇಂದ್ರ ನಾಯಕರೂ ಕೂಡ ಬಿಎಸ್‌ವೈ ಬಿಟ್ಟರೆ ಬೇರೆ ಯಾರೂ ಕರ್ನಾಟಕದಲ್ಲಿ ಇಲ್ಲ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇದನ್ನು ಸರಿಪಡಿಸಬೇಕಾದರೆ, ಬಿಜೆಪಿಗಾಗಿ ಜೀವನ ಸವೆಸಿದ ರಘುಪತಿ ಭಟ್‌ ಅಂತಹವರನ್ನು ಪರಿಷತ್‌ ಚುನಾವಣೆಯಲ್ಲಿ ಆರಿಸಬೇಕು. ಆಗ ಮಾತ್ರ ರಾಜ್ಯ ಬಿಜೆಪಿಯನ್ನು ಪೂರ್ತಿಯಾಗಿ ಶುದ್ಧೀಕರಣ ಮಾಡಲು ಸಾಧ್ಯವಿದೆ ಎಂದು ಈಶ್ವರಪ್ಪ ಪ್ರತಿಪಾದಿಸಿದರು.

ಮಂಗಳೂರು ಪಾಕಿಸ್ತಾನದಲ್ಲಿಲ್ಲ: ಕೆ.ಎಸ್.ಈಶ್ವರಪ್ಪ

May 29 2024, 12:46 AM IST
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂಧರು ನಮ್ಮ ಸರ್ಕಾರ, ಟಿಪ್ಪು ಸುಲ್ತಾನ್‌ನ ರಾಜ್ಯ ಎನ್ನುತ್ತಿದ್ದಾರೆ. ಹೀಗೆ ಬಿಟ್ಟರೆ ಅವರು ಹಿಂದುಗಳ ಮನೆಗೂ ಬಂದು ನಮಾಜ್ ಮಾಡುತ್ತಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯೋ ಸತ್ತಿದೆಯೋ ಗೊತ್ತಾಗುತ್ತಿಲ್ಲ ಎಂದವರು ಹೇಳಿದರು.

ಮತ್ತೆ ‘ರಾಯಣ್ಣ ಬ್ರಿಗೇಡ್‌’ ಕಟ್ಟಲು ಚಿಂತನೆ: ಈಶ್ವರಪ್ಪ

May 27 2024, 05:14 AM IST

ಲೋಕಸಭಾ ಚುನಾವಣೆ ಮುಗಿದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಕುರಿತು ತೀರ್ಮಾನಿಸುವೆ ಎಂದು ಮಾಜಿ ಡಿಸಿಎಂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಮಾಜಿ ಸಚಿವ ಈಶ್ವರಪ್ಪ

May 27 2024, 01:04 AM IST
ಬಿಜೆಪಿಯಿಂದ ಉಚ್ಚಾಟನೆಗೊಂಡು ರಾಜಕೀಯವಾಗಿ ಅತಂತ್ರವಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಪ್ರವರ್ಧಮಾನಕ್ಕೆ ಬರಲು ತಮ್ಮ ಹಳೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಚುನಾವಣೆ ಮುಗಿದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಚಟುವಟಿಕೆ ಆರಂಭಿಸುವ ಸುಳಿವು ನೀಡಿದ್ದಾರೆ.

ರಾಷ್ಟ್ರಭಕ್ತ ಮತದಾರರಿಂದ ಡಾ.ಸರ್ಜಿ ತಿರಸ್ಕಾರ ಶತಸಿದ್ಧ: ಕೆ.ಎಸ್‌.ಈಶ್ವರಪ್ಪ

May 26 2024, 01:32 AM IST
ರಘುಪತಿ ಭಟ್ ರಿಗೆ ಈ ಬಾರಿಯ ವಿಧಾನಪರಿಷತ್ ನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಲಿದ್ದು ನನ್ನಂತೆ ರಘುಪತಿ ಭಟ್ಟರಿಗೂ ಅನ್ಯಾಯವಾಗಿದೆ. ಚುನಾವಣೆ ಸಿದ್ಧತೆಗಳ ಮಾಡಿಕೊಳ್ಳಿ ಎಂದು ಆಶ್ವಾಸನೆ ನೀಡಿ ಇತ್ತೀಚೆಗೆ ಪಕ್ಷಕ್ಕೆ ಸೇರಿದ ಧನಂಜಯ್ ಸರ್ಜಿಯವರ ಅಭ್ಯರ್ಥಿ ಎಂದು ಘೋಷಿಸಿರುವುದು, ಬಿಜೆಪಿ ಕಟ್ಟಿದ ಎಲ್ಲ ಪ್ರಾಮಾಣಿಕ ಕಾರ್ಯಕರ್ತರಿಗೆ ನೋವು ತಂದಿದೆ.

ಪಕ್ಷ ನಿಷ್ಠ ರಘುಪತಿ ಭಟ್‌ರಿಗೂ ಬಿಜೆಪಿ ನಾಯಕರಿಂದ ಮೋಸ: ಈಶ್ವರಪ್ಪ

May 22 2024, 12:51 AM IST
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸಿಡಿದೆದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪನವರ ರಾಷ್ಟ್ರಭಕ್ತ ಬಳಗ ಇದೀಗ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯೂ ಆಗಿರುವ ಮಾಜಿ ಶಾಸಕ ರಘುಪತಿ ಭಟ್‌ ಅವರಿಗೆ ಬೆಂಬಲ ಘೋಷಿಸಿದೆ.

ಚುನಾವಣೆ ಕೊನೆ ಹೊತ್ತಲ್ಲಿ ನಕಲಿ ಸುದ್ದಿಗಳ ಹರಿಬಿಡ್ತಾರೆ: ಕೆ.ಎಸ್. ಈಶ್ವರಪ್ಪ

May 22 2024, 12:51 AM IST
ಬಿಜೆಪಿ ಅಂದರೆ ಈಶ್ವರಪ್ಪ, ಈಶ್ವರಪ್ಪ ಅಂದರೆ ಪಕ್ಷ ಎನ್ನುತ್ತಿದ್ದ ಸಂದರ್ಭದಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಅದೇ ರೀತಿ ನಾನು ಸತ್ತರೆ ನನ್ನ ಎದೆಯ ಮೇಲೆ ಬಿಜೆಪಿ ಬಾವುಟ ಇರಬೇಕು ಎಂದು ಹೇಳುವ ರಘುಪತಿ ಭಟ್‌ ಅವರಿಗೂ ಮೋಸವಾಯಿತು. ಪಕ್ಷ ನಿಷ್ಠ ರಘುಪತಿರನ್ನು ಬಹುಮತದಿಂದ ಗೆಲ್ಲಿಸಬೇಕು. ಆ ರೀತಿ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು. ಪಕ್ಷ ಎಂದರೆ ತಾವುಗಳು ಮಾತ್ರ, ತಮ್ಮ ಕುಟುಂಬ ಮಾತ್ರ. ತಮ್ಮ ನಿರ್ಧಾರವೇ ಪಕ್ಷದ ನಿರ್ಧಾರ. ತಮ್ಮ ಹಿಂಬಾಲಕರಿಗೆ ಮಾತ್ರ ಎಲ್ಲ ಅವಕಾಶ ಕಲ್ಪಿಸಬೇಕು ಎಂದುಕೊಂಡವರಿಗೆ ಈ ಮೂಲಕ ಪಾಠ ಕಲಿಸಬೇಕು.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • ...
  • 23
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved