ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉದ್ಯೋಗ ಮಾತ್ರವಲ್ಲ, ವ್ಯಾಪಾರ ಹಾಗೂ ಉದ್ಯಮ ಕ್ಷೇತ್ರದ ಅವಕಾಶಗಳಿಂದಲೂ ಕನ್ನಡಿಗರು ವಂಚಿತರಾಗುತ್ತಿದ್ದು, ಉದ್ದಿಮೆಗಳೂ ಪರಭಾಷಿಕರ ಪಾಲಾಗುವಂತಹ ವಾತಾವರಣ ನಿರ್ಮಾಣವಾಗಿದೆ.
ಇತ್ತೀಚೆಗೆ ಇಹಲೋಕ ತ್ಯಜಿಸಿದ ಟಾಟಾ ಉದ್ಯಮ ಸಾಮ್ರಾಜ್ಯದ ಅಧಿಪತಿ ರತನ್ ಟಾಟಾ ಅವರಿಗೆ ನಾಯಿಗಳ ಬಗ್ಗೆ ಇರುವ ಪ್ರೀತಿ ತಿಳಿದಿದೆ. ಆದರೆ, ಅವರು ಬಿಟ್ಟುಹೋದ 10,000 ಕೋಟಿ ರು. ಮೌಲ್ಯದ ಆಸ್ತಿಯಲ್ಲಿ ತಮ್ಮ ನೆಚ್ಚಿನ ಜರ್ಮನ್ ಶೆಫರ್ಡ್ ನಾಯಿ ‘ಟೀಟೂ’ವಿಗೂ ಪಾಲು ನೀಡಿರುವ ಕುತೂಹಲಕರ ಸಂಗತಿ ಬೆಳಕಿಗೆ
ಟಾಟಾ ಸಮೂಹ ಸಂಸ್ಥೆ ಭಾರತದ ಅತಿ ದೊಡ್ಡ ಉತ್ಪಾದನಾ ಸಂಸ್ಥೆಯಾಗಿದೆ. ಇದನ್ನು 1868ರಲ್ಲಿ ಭಾರತದ ಕೈಗಾರಿಕಾ ಪಿತಾಮಹಾ ಜೆಮ್ಶೆಡ್ಜಿ ಟಾಟಾ ಸ್ಥಾಪಿಸಿದರು. ಮಹಾರಾಷ್ಟ್ರದ ಮುಂಬೈ ಹಾಗೂ ನವಿಮುಂಬೈಗಳಲ್ಲಿ ಟಾಟಾಗ್ರೂಪ್ನ ಪ್ರಧಾನ ಕಚೇರಿ ಇದೆ.
ದಶಕಗಳ ಕಾಲ ಟಾಟಾ ಸಮೂಹ ಮುನ್ನಡೆಸಿದ ರತನ್ ಟಾಟಾ ಜನ ಸಾಮಾನ್ಯರೊಂದಿಗೆ ನೇರವಾಗಿ ಬೆರೆತಿದ್ದು ಇಲ್ಲವೇ ಇಲ್ಲವೆನ್ನುವಷ್ಟು ತೀರಾ ಕಡಿಮೆ. ಕಂಪನಿಯ ಕೆಲಸಗಳಲ್ಲಿ ಎಲ್ಲರೊಂದಿಗೂ ಜೊತೆಗೂಡುವುದನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಮೌನಿ. ಅವರದ್ದು ಏನಿದ್ದರೂ ಕೆಲಸದ ಮೂಲಕವೇ ಮಾತು.