ದತ್ ಸಕ್ಕರೆ ಕಾರ್ಖಾನೆಗೆ ಕನ್ನಡ ಭಾಷೆ ಬಳಸಲು ಆಗ್ರಹ
Dec 08 2024, 01:16 AM ISTಕನ್ನಡಪ್ರಭ ವಾರ್ತೆ ಚಡಚಣ ಹಾವಿನಾಳ ಗ್ರಾಮದ ಶ್ರೀ ದತ್ ಸಕ್ಕರೆ ಕಾರ್ಖಾನೆಯ ಆಡಳಿತದಲ್ಲಿ ಮರಾಠಿ ಭಾಷೆ ಬಳಸಲಾಗುತ್ತಿದೆ. ಕೂಡಲೇ ಇದನ್ನು ನಿಲ್ಲಿಸಿ, ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಬಳಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.