ವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ನುಡಿ ಹಬ್ಬ
Dec 10 2024, 12:30 AM ISTಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಹಾಗು ವಾಗ್ದೇವಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ನಡೆಯಿತು. ಹೊಳಲ್ಕೆರೆಯ ಮುಖ್ಯ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ವಾಗ್ದೇವಿ ಶಾಲಾ ಮಕ್ಕಳು ಪಾಲ್ಗೊಂಡು ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಲ್ಲದೇ ಕನ್ನಡದ ನುಡಿ ತೇರು, ಅಂಬಾರಿಯ ಪ್ರತಿ ಕೃತಿಯನ್ನು ಹೊತ್ತು ಸಾಗಿದ ಆನೆಯ ಮಾದರಿ, ಯಕ್ಷಗಾನ, ಕೋಲಾಟ ದೈವರಾಧನೆ, ವೇಷಧಾರಣ ಎತ್ತು ನೋಡಿದರೂ ರಾರಾಜಿಸುತ್ತಿದ್ದ ಕನ್ನಡ ಬಾವುಟಗಳು, ಧ್ವಜಗಳು 2000 ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ ನಡೆಯಿತು.