ಕಾಂಗ್ರೆಸ್ ಪಕ್ಷದ ಅಧಿನಾಯಕಿ ದಿವಂಗತ ಇಂದಿರಾ ಗಾಂಧಿಯವರು ಆದೇಶಿಸಿದ್ದ ಉಳುವವನೇ ಭೂ ಒಡೆಯ ಕಾನೂನನ್ನು ಉಪಮುಖ್ಯಮಂತ್ರಿಗಳ ಬಲಗೈ ಬಂಟ ರಾಮನಗರ ಶಾಸಕ ಇಕ್ಬಾಲ್ ಹುಸೇನ್ರವರೇ ಧಮನಗೊಳಿಸುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ನಗರ ವ್ಯಾಪ್ತಿಯ ಚಿಕ್ಕಮಳೂರು ಮಂಗಳವಾರಪೇಟೆ, ಮರಳುಹೊಲ, 8ನೇ ಕ್ರಾಸ್ ಸರ್ಕಲ್, ಭೈರವ ಅಂಗಡಿ, ತಮಿಳು ಕಾಲೋನಿ, ಕೆಂಪೇಗೌಡ ಸರ್ಕಲ್, ಕೋಟೆ ಸರ್ಕಲ್, ವರದರಾಜಸ್ವಾಮಿ ದೇವಸ್ಥಾನ, ಸ್ವಿಪರ್ಸ್ ಕಾಲೋನಿ, ಹನುಮಂತ ನಗರ ಸೇರಿದಂತೆ ಇನ್ನಿತರೆ ವಾರ್ಡ್ ಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ಮಾಡಿದರು.