ಗಣೇಶೋತ್ಸವ ಪೆಂಡಾಲ್ ನಿರ್ಮಾಣಕ್ಕೆ ವನಿತಾಮಧು ಚಾಲನೆ
Sep 05 2024, 12:31 AM ISTಭಾದ್ರಪದ ಶುಕ್ಲ ಚತುರ್ಥಿಯಿಂದ ಮಹಾನವಮಿಯ ದಸರಾ ಹಬ್ಬದವರೆಗೆ 35 - 40ದಿನಗಳ ಕಾಲ ನಡೆಸಲ್ಪಡುವ ಬೀರೂರಿನ ಗಣಪತಿ ಪೆಂಡಾಲ್ ನಿರ್ಮಾಣ, ಶ್ರೀ ಡಾ. ನಂಜುಂಡಸ್ವಾಮಿ ರಂಗಮಂಟಪದಲ್ಲಿ ಕಾಲದ ದಸರಾ ಮೈಲಾರಲಿಂಗಸ್ವಾಮಿ ಕಾರ್ಣಿಕೋತ್ಸವ, ಗಣೇಶೋತ್ಸವದ ಪ್ರತಿಷ್ಠಾಪನೆಯ ಚಪ್ಪರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪುರಸಭೆ ಅಧ್ಯಕ್ಷೆ ವನಿತಾಮಧು ಮತ್ತು ಮಿತ್ರ ಸಮಾಜದ ಅಧ್ಯಕ್ಷ ಎನ್.ಎಂ. ನಾಗರಾಜ್ ಬುಧವಾರ ಚಾಲನೆ ನೀಡಿದರು. ಅರ್ಚಕರಾದ ಕುಮಾರ್ ಶಾಸ್ತ್ರೀ ಚಪ್ಪರ ಪೂಜೆ ನೆರವೇರಿಸಿದರು.