ತಂತ್ರಜ್ಞಾನ ಬೆಳವಣಿಗೆಯಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ: ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅಭಿಮತ
Dec 16 2024, 12:46 AM IST21ನೇ ಶತಮಾನ ಜ್ಞಾನಾಧಾರಿತ ಸಮಾಜವಾಗಿದ್ದು, ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಒಂದು ದೇಶ ಶಕ್ತಿಯುತ, ಸ್ವಾವಲಂಬಿ ಆಗಲು ಸಾಧ್ಯ. ಅದನ್ನು ಬದಲಿಸುವ ಪ್ರಯತ್ನಕ್ಕೆ ಯಾರೂ ಸಹಕರಿಸುವುದಿಲ್ಲ. ಉನ್ನತ ಶಿಕ್ಷಣ ಸಚಿವನಾಗಿ ನಾನು ಅಂಥ ಸಮಸ್ಯೆ ಎದುರಿಸಿದ್ದೇನೆ. ವಿದ್ಯಾಸಂಸ್ಥೆಗಳು ನಿಜವಾದ ಶಕ್ತಿ ಕೇಂದ್ರವಾಗಿದ್ದು, ಅವುಗಳಿಗೆ ಸ್ವಾಯತ್ತತೆ, ಸ್ವಾತಂತ್ರ್ಯ ನೀಡಬೇಕು.