ಮಕ್ಕಳಿಗೆ ಜೀವನದಲ್ಲಿ ತಂದೆ, ತಾಯಿಯೇ ಆದರ್ಶವಾಗಬೇಕು
Feb 29 2024, 02:03 AM IST ಮಕ್ಕಳ ಮನಸ್ಸು ಹೂವಿನಷ್ಟೇ ನವಿರು. ಹಾಗಾಗಿ ಅವರಿಗೆ ಸಲಹೆ ನೀಡುವ ಬದಲು ನಮ್ಮ ನಡೆ, ನುಡಿ ಶುದ್ಧವಾಗಿದ್ದರೆ ಅವರ ಹಾದಿಯೂ ಸರಿಯಾಗಿರುತ್ತದೆ. ಏಕೆಂದರೆ ನಮ್ಮನ್ನು ಗಮನಿಸುವ ಮಕ್ಕಳು, ನಮ್ಮನ್ನೇ ಅನುಕರಿಸುತ್ತವೆ ಎಂದು ಸೊರಬ ತಾಲೂಕು ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.