ಬಿಕ್ಕೋಡಿನಲ್ಲಿ ತ್ಯಾಜ್ಯ ಸ್ವಚ್ಛತೆಗೆ ಗ್ರಾಪಂ ನಿರಾಸಕ್ತಿ
Feb 01 2025, 12:00 AM ISTಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಟಣ, ಬೀದಿಗಳ ನಿರ್ವಹಣೆಗೆ ದಿನಗೂಲಿ ನೌಕರನನ್ನು ನೇಮಿಸಿ ಸ್ವಚ್ಛತೆ ಮಾಡಲು ಬಿಟ್ಟಿದ್ದು ಬೇಕಾಬಿಟ್ಟಿ ಕೆಲಸ ಮಾಡಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಕಬ್ಬುನಾರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಯಲ್ಲಿ ಅಲ್ಲದೆ ಗ್ರಾಮ ಪಂಚಾಯತಿ ಸುತ್ತಮುತ್ತಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಬೀದಿಗಳಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ವಯಸ್ಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.