ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತದ ಕ್ರಮ ನಿರೀಕ್ಷೆಯಂತೆಯೇ ನವರಾತ್ರಿ ಖರೀದಿ ಮೇಲೆ ಭಾರೀ ಸಕಾರಾತ್ಮಕ ಪರಿಣಾಮ ಬೀರಿದೆ. ಈ ಬಾರಿಯ ನವರಾತ್ರಿಯಲ್ಲಿ ಗೃಹಬಳಕೆ ವಸ್ತುಗಳು, ನಿತ್ಯೋಪಯೋಗಿ ವಸ್ತುಗಳು, ಕಾರು, ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.
ಬಿಡುಗಡೆಯಾದ ದಿನವೇ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ‘ಕಾಂತಾರ ಚಾಪ್ಟರ್ 1’ ಎರಡನೇ ದಿನವೇ 100 ಕೋಟಿ ಕ್ಲಬ್ ಸೇರಿದೆ. ಭಾರತದಲ್ಲಿ ಸಿನಿಮಾದ ಅಂದಾಜು ಕಲೆಕ್ಷನ್ 106 ಕೋಟಿ ರು. ಎಂದು ಅಂದಾಜಿಸಲಾಗಿದೆ.
ಕಳೆದ ಶುಕ್ರವಾರ ಸಿಂಗಾಪುರದಲ್ಲಿ ದುರಂತ ಅಂತ್ಯ ಕಂಡ ಗಾಯಕ ಜುಬೀನ್ ಗಾರ್ಗ್ ಅವರ ಅಂತಿಮ ಯಾತ್ರೆಯು ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರಿದ ಅಂತಿಮ ದರ್ಶನ ಯಾತ್ರೆಯ ಪೈಕಿ 4ನೇ ಸ್ಥಾನ ಪಡೆದು ಲಿಮ್ಕಾ ದಾಖಲೆ ನಿರ್ಮಿಸಿದೆ.