ಸಂಕಟದ ಮಧ್ಯೆ ದೀಪಾವಳಿ ಸಂಭ್ರಮ ಜೋರು
Oct 22 2025, 01:03 AM ISTಕನ್ನಡಪ್ರಭ ವಾರ್ತೆ ಇಂಡಿ ನಾಡಿನಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿದೆ. ರಾಜ್ಯದ ಗಡಿಯಂಚಿನ ಪ್ರದೇಶ ಇಂಡಿ ತಾಲೂಕಿನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ ಹಾಗೂ ಮಳೆಯಿಂದಾದ ಸಂಕಷ್ಟವನ್ನು ಮರೆದು ಜನರು ಹಬ್ಬವನ್ನು ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಹಬ್ಬದ ಖರೀದಿಯೂ ಕೂಡ ಜೋರಾಗಿದ್ದು, ಎಲ್ಲೆಡೆ ಮಾರುಕಟ್ಟೆಗಳು, ವಾಹನಗಳ ಶೋ ರೂಂ, ಆಭರಣ ಮಳಿಗೆಗಳು, ಅಲಂಕಾರಿಕ ಸಾಮಗ್ರಿಗಳು ಅಂಗಡಿ, ಪಟಾಕಿಗಳ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ.