• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಾರುಕಟ್ಟೆಯಲ್ಲಿ ಕಳೆಗಟ್ಟಿದ ದೀಪಾವಳಿ ವ್ಯಾಪಾರ

Nov 01 2024, 12:32 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಗುಮ್ಮಟ ನಗರಿ ಹಾಗೂ ಬಸವನಾಡು ವಿಜಯಪುರ ಜಿಲ್ಲೆ ಸಜ್ಜಾಗಿದೆ. ಹಬ್ಬದ ಮೊದಲ ದಿನ ಗುರುವಾರ ಎಲ್ಲೆಡೆ ಹಬ್ಬದ ಸಡಗರ ಜೋರಾಗಿದೆ. ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಲು ಜನರು ಭರ್ಜರಿ ಸಿದ್ಧತೆ ನಡೆಸಿದ್ದು, ಮನೆಗಳ ಅಲಂಕಾರ, ಸಿಂಗಾರ ಜೋರಾಗಿದೆ. ಇನ್ನು, ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಇತ್ತ ನಗರದೆಲ್ಲೆಡೆ ಜನರು ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು ಆದ ಅತಿವೃಷ್ಟಿಯ ಪರಿಣಾಮ ದೀಪಾವಳಿಯ ಮೇಲೆ ಬಿದ್ದಂತೆ ಕಂಡು ಬರುತ್ತಿಲ್ಲ.

ದೀಪಾವಳಿ ಹಬ್ಬಕ್ಕೆ ಖರೀದಿ ಬಲು ಜೋರು

Nov 01 2024, 12:19 AM IST
ದೀಪಾವಳಿಯ ಆಚರಣೆಗೆ ನಗರದ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳು ಬಾಳೇಕಂದು, ಮಾವಿನಸೊಪ್ಪು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ನಾಗರಿಕರು ಸಡಗರದಿಂದ ಖರೀದಿಸಿದರು. ತಾಲೂಕಿನ ಜನತೆದೀಪಾವಳಿ ಹಬ್ಬದ ನರಕ ಚತುದರ್ಶಿ ಹಾಗೂ ಬಲಿಪಾಡ್ಯಮಿ ಹಬ್ಬಗಳನ್ನು ಸಂಭ್ರಮದಲ್ಲಿ ಆಚರಿಸಲು ಅಗತ್ಯ ವಸ್ತುಗಳ ಕೊಳ್ಳಲು ನಾಗರಿಕರು ಇಂದು ಮಾರುಕಟ್ಟೆಗೆ ಲಗ್ಗೆ ಹಾಕಿದ್ದರು.

ಕಾರವಾರದಲ್ಲಿ ದೀಪಾವಳಿ ಹಬ್ಬಕ್ಕಾಗಿ ಖರೀದಿ ಭರಾಟೆ ಜೋರು

Nov 01 2024, 12:17 AM IST
ದಸರಾಕ್ಕಿಂತ ಈ ಹಬ್ಬಕ್ಕೆ ಹೂವು ಹಣ್ಣಿದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಇಲ್ಲಿನ ಸವಿತಾ ಸರ್ಕಲ್, ಗ್ರೀನ್ ಸ್ಟ್ರೀಟ್, ಗಾಂಧಿ ಮಾರುಕಟ್ಟೆ ಅಂಗಡಿಗಳ ಎದುರು ಜನಜಂಗುಳಿ ನೆರೆದಿತ್ತು.

ದೀಪಾವಳಿ: ಬೆಲೆ ಏರಿಕೆ ನಡುವೆ ಭರ್ಜರಿ ಖರೀದಿ

Nov 01 2024, 12:15 AM IST
ಕಡೂರು, ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ಖರೀದಿ ಜೋರಾಗಿದ್ದರೂ ಬೆಲೆ ಏರಿಕೆಯ ಬಿಸಿ ಕೂಡ ಏರಿತ್ತು. ಪಟ್ಟಣದ ಶ್ರೀ ಪೇಟೆ ಗಣಪತಿ- ಆಂಜನೇಯ ಸ್ವಾಮಿ ವೃತ್ತದಲ್ಲಿ ಮಹಿಳೆಯರು ದೀಪಾವಳಿ ಹಬ್ಬದ ಅಗತ್ಯ ವಸ್ತುಗಳ ಖರೀದಿಗೆ ಗುರುವಾರ ಬೆಳಗಿನಿಂದಲೇ ಪಟ್ಟಣದಲ್ಲಿ ಹಾದು ಹೋಗುವ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಮುಗಿಬಿದ್ದಿದ್ದರು

ಪೂರ್ವ ಲಡಾಖ್‌ನಲ್ಲಿ ಪರಸ್ಪರ ಶಾಂತಿ ಮಾತುಕತೆ - 4 ವರ್ಷಗಳ ಬಳಿಕ 5 ಗಡೀಲಿ ಭಾರತ- ಚೀನಾ ದೀಪಾವಳಿ

Nov 01 2024, 12:13 AM IST
ಪೂರ್ವ ಲಡಾಖ್‌ನಲ್ಲಿ ಪರಸ್ಪರ ಶಾಂತಿ ಮಾತುಕತೆ ಮೂಲಕ ಸೇನಾ ಹಿಂಪಡೆತ ನಡೆದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ 5 ಗಡಿ ಪ್ರದೇಶಗಳಲ್ಲಿ ಗುರುವಾರ ಭಾರತ ಮತ್ತು ಚೀನಾ ಯೋಧರು ಪರಸ್ಪರ ಸಿಹಿ ಹಂಚಿ ದೀಪಾವಳಿ ಆಚರಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಜಾತ್ರೆ

Nov 01 2024, 12:12 AM IST
ಹನೂರಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಜಾತ್ರೆ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳು ಸಾಲೂರು ಬೃಹನ್‌ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ನೇತೃತ್ವದಲ್ಲಿ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆಯಿತು.

ದೀಪಾವಳಿ ಹಬ್ಬಕ್ಕೆ ಭರ್ಜರಿ ವ್ಯಾಪಾರ

Nov 01 2024, 12:11 AM IST
ಜಿ.ಕೆ. ಬಂಡಿ ಗಾರ್ಡನ್ ರಸ್ತೆಯಲ್ಲಿ ಹಣ್ಣು, ತರಕಾರಿ, ಅಲಂಕಾರಿಕ ವಸ್ತು, ಕಬ್ಬು, ಹೂ, ಬಾಳೆ ದಿಂಡು, ಡೈರಿ ಹೂವಿನ ಗಿಡಗಳ ಮಾರಾಟ

ಜಿಲ್ಲೆಯ ವಿವಿಧೆಡೆ ಸಂಭ್ರಮದ ದೀಪಾವಳಿ ಆಚರಣೆ

Nov 01 2024, 12:11 AM IST
ಚಿಕ್ಕಮಗಳೂರು, ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಸಾಂಪ್ರದಾಯಕವಾಗಿ ದೀಪಾವಳಿ ಆಚರಿಸಲಾಯಿತು. ಒಂದೆಡೆ ಅಂಗಡಿ ಮನೆಗಳಲ್ಲಿ ಲಕ್ಷ್ಮಿಯನ್ನು ಆರಾಧಿಸಿದರೆ, ಮುಂಜಾನೆಯೆ ಅಭ್ಯಂಜನ ಮಾಡಿ ತಮ್ಮ ಪದ್ಧತಿಯಂತೆ ದೇವರನ್ನು ಪೂಜಿಸಿದರು. ನರಸಿಂಹರಾಜಪುರದಲ್ಲಿ ದೀಪಾವಳಿ 2ನೇ ದಿನ ಲಕ್ಷ್ಮಿಪೂಜೆ, ಅಂಗಡಿ ವಾಹನ ಪೂಜೆ ಹಾಗೂ ಚೀನಿಕಾಯಿ ಕಡಬನ್ನು ತಯಾರಿಸಿ ಹಬ್ಬ ಆಚರಿಸಲಾಯಿತು.

ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಿ: ಮ.ವಿ.ರಾಮ್ ಪ್ರಸಾದ್ ಮನವಿ

Nov 01 2024, 12:10 AM IST
ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಪಟಾಕಿಯಿಂದ ಉಂಟಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪೌರಕಾರ್ಮಿಕರಿಗೆ ದೊಡ್ಡ ಸವಾಲು. ಪಟಾಕಿ ಸಿಡಿಸುವ ಬದಲು ರಂಗೋಲಿ ಹಾಕಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಿದಲ್ಲಿ ಪ್ರಾಣಿ ಸಂಕುಲಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಇರುವುದಿಲ್ಲ.

ಪರಿಸರ ರಕ್ಷಿಸಲು ಹಣತೆ ಹಚ್ಚಿ ದೀಪಾವಳಿ ಆಚರಿಸಿ

Nov 01 2024, 12:09 AM IST
ದೀಪಾವಳಿ ಹಬ್ಬದಂದು ಪ್ರತಿಯೊಬ್ಬರು ಹಣತೆಯ ದೀಪವನ್ನು ಹಚ್ಚಬೇಕು. ಸದ್ದು ಮಾಡುವ ಪಟಾಕಿಯನ್ನು ಹೊಡೆಯಬಾರದು ಏಕೆಂದರೆ ಇದರಿಂದ ಶಬ್ದ ಮಾಲಿನ್ಯ ವಾಯುಮಾಲಿನ್ಯ ಉಂಟಾಗುತ್ತದೆ. ಪಟಾಕಿಗಳಿಂದ ಹೊರಬರುವಂತಹ ವಿಷಕಾರಿ ಹೊಗೆಯಿಂದಾಗಿ ಪರಿಸರ ಮಾಲಿನ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯ ಮೇಲೆ ಪರಿಣಾಮಬೀರುತ್ತದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved