ಮಾರುಕಟ್ಟೆಯಲ್ಲಿ ಕಳೆಗಟ್ಟಿದ ದೀಪಾವಳಿ ವ್ಯಾಪಾರ
Nov 01 2024, 12:32 AM ISTಕನ್ನಡಪ್ರಭ ವಾರ್ತೆ ವಿಜಯಪುರ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಗುಮ್ಮಟ ನಗರಿ ಹಾಗೂ ಬಸವನಾಡು ವಿಜಯಪುರ ಜಿಲ್ಲೆ ಸಜ್ಜಾಗಿದೆ. ಹಬ್ಬದ ಮೊದಲ ದಿನ ಗುರುವಾರ ಎಲ್ಲೆಡೆ ಹಬ್ಬದ ಸಡಗರ ಜೋರಾಗಿದೆ. ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಲು ಜನರು ಭರ್ಜರಿ ಸಿದ್ಧತೆ ನಡೆಸಿದ್ದು, ಮನೆಗಳ ಅಲಂಕಾರ, ಸಿಂಗಾರ ಜೋರಾಗಿದೆ. ಇನ್ನು, ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಇತ್ತ ನಗರದೆಲ್ಲೆಡೆ ಜನರು ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು ಆದ ಅತಿವೃಷ್ಟಿಯ ಪರಿಣಾಮ ದೀಪಾವಳಿಯ ಮೇಲೆ ಬಿದ್ದಂತೆ ಕಂಡು ಬರುತ್ತಿಲ್ಲ.