ನಕಲಿ ಚಿನ್ನ ಅಡವಿಡುವ ತಂಡ ಮೇಲೆ ಕ್ರಮ ಕೈಗೊಳ‍್ಳುವಂತೆ ಚಿನ್ನ, ಬೆಳ್ಳಿ ಕೆಲಸಗಾರರ ಮನವಿ
Aug 13 2025, 12:30 AM ISTಉಡುಪಿ ಜಿಲ್ಲೆಯ ಬ್ಯಾಂಕ್‌ಗಳು, ಫೈನಾನ್ಸ್‌ಗಳಲ್ಲಿ ಹಾಗೂ ಸೊಸೈಟಿಗಳಲ್ಲಿ ನಕಲಿ ಚಿನ್ನ ಅಡವಿಡುವ ತಂಡಗಳು ಕಾರ್ಯಚರಿಸುತ್ತಿದ್ದು, ಇದರಿಂದ ಚಿನ್ನಾಭರಣ ಪರಿವೀಕ್ಷಕರಿಗೆ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಈ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಮಂಗಳವಾರ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಹಾಗೂ ಉಪ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.