ನಾಗಮಂಗಲ ತಾಲೂಕಿನಾದ್ಯಂತ ಶಾಂತಿಯುತ ಮದಾನ
Apr 27 2024, 01:19 AM ISTನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಮತಗಟ್ಟೆ ಸಂಖ್ಯೆ 212ರಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ ಹಾಗೂ ಪುತ್ರ ಸಚ್ಚಿನ್ ಜೊತೆಗೂಡಿ ಮತ ಚಲಾಯಿಸಿದರೆ, ಪಟ್ಟಣದ ತಾಪಂ ಕಚೇರಿಯ ಮತಗಟ್ಟೆ ಸಂಖ್ಯೆ 94ರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ ಚಲಾಯಿಸಿದರು. ಇದೇ ಕಟ್ಟಡದ ಮತಗಟ್ಟೆ ಸಂಖ್ಯೆ 93ರಲ್ಲಿ ಮಾಜಿ ಶಾಸಕ ಸುರೇಶ್ಗೌಡ, ಪತ್ನಿ ಗೀತಾ ಹಾಗೂ ಪುತ್ರಿ ಧನ್ಯತಾ ಮತ ಚಲಾಯಿಸಿದರು.