• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನಾಗಮಂಗಲ : ಟೈರ್ ಸಿಡಿದು ರಸ್ತೆ ಬದಿಗೆ ಮಗುಚಿದ ಕಾರು - ಗಂಭೀರವಾಗಿ ಗಾಯಗೊಂಡಿದ್ದ ನಿವೃತ್ತ ಶಿಕ್ಷಕ ಸಾವು

Sep 12 2024, 02:00 AM IST
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ತಮ್ಮ ಮಗನನ್ನು ನೋಡಲು ಆಲೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಚಂದ್ರಶೆಟ್ಟಿ ತೆರಳುತ್ತಿದ್ದರು. ಈ ವೇಳೆ ತಾಲೂಕಿನ ತಿರುಮಲಾಪುರ ಗೇಟ್ ಬಳಿ ಕಾರಿನ ಟೈರ್ ಸಿಡಿದು ಹೆದ್ದಾರಿ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ ಚಂದ್ರಶೆಟ್ಟಿ ಸಾವನ್ನಪ್ಪಿದ್ದಾರೆ.

ನಾಗಮಂಗಲ ಪುರಸಭೆ ಕಾಂಗ್ರೆಸ್ ಗೆ ಅಧಿಕಾರದ ಚುಕ್ಕಾಣಿ

Aug 24 2024, 01:25 AM IST
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರೂ ಕೂಡ ಜೆಡಿಎಸ್‌ನ 4ನೇ ವಾರ್ಡ್ ಸದಸ್ಯೆ ಭಾರತಿ ಮತ್ತು 2ನೇ ವಾರ್ಡ್ ಸದಸ್ಯೆ ರತ್ನಮ್ಮ ತಟಸ್ಥವಾಗಿ ಕುಳಿತಿದ್ದರು. ಇದರಿಂದ ತಮ್ಮ ರಾಜಕೀಯ ಚಾಣಕ್ಷ್ಯತನದಿಂದ ಸುಲಭವಾಗಿ ಪುರಸಭೆಯ ಅಧಿಕಾರ ಹಿಡಿಯುವಲ್ಲಿ ಸಚಿವ ಚಲುವರಾಯಸ್ವಾಮಿ ಯಶಸ್ವಿಯಾದರು.

ನಾಗಮಂಗಲ : ಕೌಟುಂಬಿಕ ಕಲಹ - ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ

Aug 23 2024, 01:18 AM IST

ಕೌಟುಂಬಿಕ ಕಲಹದಿಂದ ಪತಿ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಮಂಥನಹಳ್ಳಿಯಲ್ಲಿ ಸಂಭವಿಸಿದೆ.

ಹುದ್ದೆಗಳ ಸಮೇತ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಕಚೇರಿ ನಾಗಮಂಗಲ ಕೇಂದ್ರಕ್ಕೆ ವರ್ಗ

Aug 13 2024, 12:49 AM IST
ಸಚಿವರಾದ ಆರಂಭದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಾನೆಂದೂ ಪಕ್ಷ ರಾಜಕಾರಣ ಮಾಡುವುದಿಲ್ಲ. ಸಚಿವನಾದ ನಾನು ಜಿಲ್ಲೆಯ ಎಲ್ಲಾ ತಾಲೂಕುಗಳ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ಹೇಳಿದ್ದರು. ಈಗ ತಾವು ಆಡಿದ ಮಾತನ್ನು ಮರೆತು ಸಣ್ಣಪುಟ್ಟ ವಿಚಾರಗಳಲ್ಲೂ ಕ್ಷೇತ್ರದ ಶಾಸಕರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.

ಕಸಾಪ ನಾಗಮಂಗಲ ತಾಲೂಕು ಅಧ್ಯಕ್ಷರಾಗಿ ಸಿ.ಆರ್.ಚಂದ್ರಶೇಖರ್ ಅಧಿಕಾರ ಸ್ವೀಕಾರ

Jul 31 2024, 01:01 AM IST
ಈ ಹಿಂದೆ ಕಸಾಪ ಅಧ್ಯಕ್ಷನಾಗಿದ್ದ ವೇಳೆ ಕನ್ನಡಪರವಾದ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ತಾಲೂಕಿನಲ್ಲಿ ಕಸಾಪದ ಅರಿವು ಮೂಡಿಸಿದ್ದೇನೆ. ಅದೇ ರೀತಿ ಈ ಬಾರಿ ಪ್ರತಿ ಗ್ರಾಮ ಮಟ್ಟದಲ್ಲಿ ಕಸಾಪ ಕುರಿತಾಗಿ ಅರಿವು ಮೂಡಿಸುವ ಜತೆಗೆ ಕನ್ನಡ ಅಭಿಮಾನಿಗಳು ಹಾಗೂ ಸಾಹಿತ್ಯಸಕ್ತರನ್ನು ಗುರುತಿಸಿ ಕಸಾಪದ ಸದಸ್ಯತ್ವದ ಸಂಖ್ಯೆ ಹೆಚ್ಚಿಸುವ ಕೆಲಸ ಮಾಡುತ್ತೇನೆ.

ನಾಗಮಂಗಲ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ತಟ್ಟಹಳ್ಳಿ ನರಸಿಂಹಮೂರ್ತಿ ಆಯ್ಕೆ

Jun 27 2024, 01:07 AM IST
ಸಂಸ್ಥೆ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ, ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಮತ್ತು ಹಿರಿಯ ಸಹಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಬ್ಯಾಂಕ್‌ನ ಅಭಿವೃದ್ಧಿಗೆ ಪೂರಕವಾಗಿ ಕ್ರಮವಹಿಸಲಾಗುವುದು. ಈ ಸಂಸ್ಥೆಯ ಅಧ್ಯಕ್ಷನನ್ನಾಗಿ ಮಾಡಿರುವ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರಿಗೆ ಅಭಿನಂದನೆ.

ನಾಗಮಂಗಲ ತಾಲೂಕಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

Jun 03 2024, 12:31 AM IST
ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಟ್ಟಿದ್ದರಿಂದ ತಾಲೂಕಿನ ರೈತರು ಈ ವರ್ಷದ ಮುಂಗಾರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿ, ಜಮೀನು ಉಳುಮೆ ಕಾರ್ಯದ ಜೊತೆಗೆ ಅಲಸಂದೆ ಸೇರಿ ಜಾನುವಾರುಗಳಿಗೆ ಹಸಿ ಮೇವಿನ ಬೀಜ ಬಿತ್ತನೆ ಮಾಡಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಜಿಲ್ಲೆಗೆ ನಾಗಮಂಗಲ ತಾಲೂಕು 4ನೇ ಸ್ಥಾನ

May 10 2024, 01:32 AM IST
ತಾಲೂಕಿನ 25 ಸರ್ಕಾರಿ ಪ್ರೌಢಶಾಲೆ, 13 ಅನುದಾನಿತ ಪ್ರೌಢಶಾಲೆ, 6 ವಸತಿ ಶಾಲೆಗಳು ಹಾಗೂ 8 ಅನುದಾನ ರಹಿತ ಪ್ರೌಢಶಾಲೆಗಳಿಂದ 1223 ಬಾಲಕರು ಮತ್ತು 1064 ಬಾಲಕಿಯರು ಸೇರಿ ಒಟ್ಟು 2287 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1704 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ನಾಗಮಂಗಲ ತಾಲೂಕಿನಾದ್ಯಂತ ಶಾಂತಿಯುತ ಮದಾನ

Apr 27 2024, 01:19 AM IST
ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಮತಗಟ್ಟೆ ಸಂಖ್ಯೆ 212ರಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ ಹಾಗೂ ಪುತ್ರ ಸಚ್ಚಿನ್ ಜೊತೆಗೂಡಿ ಮತ ಚಲಾಯಿಸಿದರೆ, ಪಟ್ಟಣದ ತಾಪಂ ಕಚೇರಿಯ ಮತಗಟ್ಟೆ ಸಂಖ್ಯೆ 94ರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ ಚಲಾಯಿಸಿದರು. ಇದೇ ಕಟ್ಟಡದ ಮತಗಟ್ಟೆ ಸಂಖ್ಯೆ 93ರಲ್ಲಿ ಮಾಜಿ ಶಾಸಕ ಸುರೇಶ್‌ಗೌಡ, ಪತ್ನಿ ಗೀತಾ ಹಾಗೂ ಪುತ್ರಿ ಧನ್ಯತಾ ಮತ ಚಲಾಯಿಸಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್ ಚಂದ್ರು ಅಬ್ಬರದ ಪ್ರಚಾರ

Apr 16 2024, 01:03 AM IST
ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು. ಸದೃಢ ಭಾರತ ನಿರ್ಮಾಣದ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದ ಜನತೆಗೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆಗಳನ್ನು ನೆನೆದು ಜನಸೇವೆ ಮಾಡಲು ನನಗೊಂದು ಅವಕಾಶ ನೀಡಬೇಕು.
  • < previous
  • 1
  • 2
  • 3
  • 4
  • 5
  • 6
  • next >

More Trending News

Top Stories
ಯಶಸ್ಸನ್ನು ಅಲ್ಲಲ್ಲೇ ಬಿಟ್ಟು ನಡೆಯಬೇಕು : ರಾಜ್‌ ಬಿ ಶೆಟ್ಟಿ
ಕೈ ಒಳ‍ಜಗಳ ಮರೆಸಲು ಆರೆಸ್ಸೆಸ್‌ ವಿರುದ್ಧ ಕುತಂತ್ರ
ಡಿಕೆಶಿ ಡಿಸಿಎಂ ಮಾಡುವ ದರ್ದು ಬಿಜೆಪಿಗಿಲ್ಲ : ಶೋಭಾ ಟಾಂಗ್‌
ನೆರೆಮನೆಯವರಿಗೆ ಆಂಧ್ರ ಖಾರದ ಅನುಭವ ಆಗ್ತಿದೆ : ನಾರಾ ಟಾಂಗ್‌
ಡಿಕೆಶಿ ಸ್ವಂತ ತಪ್ಪಿಗೆ ಜೈಲಿಗೆ ಹೋದದ್ದು, ಬಿಜೆಪಿ ಕಳಿಸಿದ್ದಲ್ಲ : ಕೋಟ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved