ಪ್ರವಾಸೋದ್ಯಮ- ಕೈಗಾರಿಕೋದ್ಯಮ ಎರಡಕ್ಕೂ ಉತ್ತೇಜನ
Aug 01 2025, 12:30 AM ISTಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ- ಧಾರವಾಡ. ಇದು ರಾಜ್ಯದ ಎರಡನೆಯ ದೊಡ್ಡ ನಗರ, ವಾಣಿಜ್ಯನಗರಿ ಎನಿಸಿಕೊಂಡಿದೆ. ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಇಲ್ಲಿದೆ. ದೇಶದ ಹಲವು ರಾಜ್ಯಗಳಿಗೆ ಇಲ್ಲಿಂದ ರೈಲು ಸಂಪರ್ಕ ಸೇವೆ ಲಭ್ಯ. ಪುಣೆ- ಬೆಂಗಳೂರು, ಹೊಸಪೇಟೆ- ಅಂಕೋಲಾ, ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿ ಹೀಗೆ ಸಾರಿಗೆ ಸಂಪರ್ಕವೂ ಸಾಕಷ್ಟಿದೆ.