ಕೆ.ಗೋವಿಂದ ಭಟ್ಟರಿಗೆ ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ
Sep 21 2024, 01:50 AM ISTಕೆ. ಗೋವಿಂದ ಭಟ್ ಅವರು ಉನ್ನತ ಶೈಲಿಯ ನಾಟ್ಯ, ಶ್ರುತಿಬದ್ಧ ಮಾತಿನ ಪ್ರಭುದ್ಧತೆಯಿಂದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಾಗಿ ಕೀರ್ತಿ ಗಳಿಸಿದ್ದಾರೆ. ಅವರು ಶ್ರೀ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಪ್ರಧಾನ ಕಲಾವಿದರಾಗಿ ಮೆರೆದವರು. ೮೪ ವರ್ಷ ಪ್ರಾಯದ ಅವರು ಸುಮಾರು ೬೦ ವರ್ಷ ಧರ್ಮಸ್ಥಳ ಒಂದೇ ಮೇಳದಲ್ಲಿ ತಿರುಗಾಟ ನಡೆಸಿ ದಾಖಲೆ ನಿರ್ಮಿಸಿದವರು.