ಪರಶುರಾಮ್ಗೆ ಕರೀಂಖಾನ್ ಸೌಹಾರ್ದ ಪ್ರಶಸ್ತಿ
Feb 28 2025, 12:52 AM ISTಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿಗೆ, ಹರಪನಹಳ್ಳಿಯ ಬಿ.ಪರಶುರಾಮ್ ಅವರು ಪಾತ್ರರಾಗಿದ್ದಾರೆ. ಬಿ.ಪರಶುರಾಮ್ ಅವರು ಸಾಮಾಜಿಕ ಬದ್ಧತೆಯೊಂದಿಗೆ ನಿರಂತರವಾಗಿ ಜನಪರ ಹೋರಾಟ ಗಳಲ್ಲಿಯೂ ಭಾಗಿಯಾಗುತ್ತ ಬಂದವರು. ಮೂಡಲಪಾಯ ಯಕ್ಷಗಾನ ಹಾಗೂ ಆಧುನಿಕ ರಂಗಭೂಮಿ ಹೀಗೆ ಎರಡೂ ಕ್ಷೇತ್ರಗಳಲ್ಲಿ ನಿರಂತರವಾಗಿ ದುಡಿಯುತ್ತ ಬಂದವರು. ಹರಪನ ಹಳ್ಳಿಯಲ್ಲಿ ಸಾಂಸ್ಕೃತಿಕ ಸಂಸ್ಥೆಯನ್ನು ಕಟ್ಟಿಕೊಂಡು ರಂಗ ಕಾಯಕ ವನ್ನು ಮುಂದುವರಿಸಿದ್ದಾರೆ.