ಬಾಂಗ್ಲಾ ನುಸುಳುಕೋರರಿಂದ ಸ್ಥಳೀಯರ ಭದ್ರತೆಗೆ ಧಕ್ಕೆ

Jul 18 2025, 12:50 AM IST
ಕೆಂಚಮ್ಮನ ಹೊಸಕೋಟೆ ಹೋಬಳಿಯ ವಾಟೆಪುರ ಕಾಫಿ ಎಸ್ಟೇಟಿನಲ್ಲಿ ಸ್ಥಳೀಯ ಕೆಲಸಗಾರರನ್ನು ಗುರುವಾರ ಭೇಟಿ ಮಾಡಿದ ಬಿಜೆಪಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ, ಹರಿಹರಪುರ ಶಾಸಕ ಬಿ ಪಿ ಹರೀಶ್, ಜೆಡಿಎಸ್‌ ಮುಖಂಡ ಎನ್ ಆರ್ ಸಂತೋಷ್‌ ತಂಡ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯ ಕಾರ್ಮಿಕರು ಹಲವು ಸಮಸ್ಯೆಗಳನ್ನು ತಂಡದ ಮುಂದೆ ತೆರೆದಿಟ್ಟರು. ತುತ್ತು ಅನ್ನಕ್ಕಾಗಿ ಗಡಿಯಲ್ಲಿ ನುಸುಳಿ ಬಂದು ಕಾಫಿ ತೋಟ ಸೇರಿಕೊಂಡ ಬಾಂಗ್ಲಾ ನುಸುಳುಕೋರರಿಂದ ಸ್ಥಳೀಯ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಮಣೆ ಹಾಕಿದ ತೋಟಗಳ ಮಾಲೀಕರೇ ಇಂದು ಅದೇ ಕಾರ್ಮಿಕರಿಂದ ಬೆದರಿಕೆ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರು.