ಅರಸೀಕೆರೆಯಲ್ಲಿ ಬಾಂಗ್ಲಾ ನುಸುಳುಕೋರ ಮತದಾರರು

Sep 03 2024, 01:41 AM IST
ಬಾಂಗ್ಲಾದೇಶದಿಂದ ಭಾರತದ ಗಡಿ ನುಸುಳಿ ಬಂದಂತಹ ಅಕ್ರಮ ವಲಸಿಗರು ಅರಸೀಕೆರೆ ತಾಲೂಕು ಒಂದರಲ್ಲೆ ಮೂರರಿಂದ ಮೂರೂವರೆ ಸಾವಿರದಷ್ಟು ಮತದಾರರಾಗಿದ್ದಾರೆ. ಇಂತಹ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ನೋಂದಣಿ ಮಾಡುತ್ತಿರುವ ಜಾಲದ ಮೂಲವನ್ನು ಮೊದಲು ಪತ್ತೆಹಚ್ಚಿ ಇಷ್ಟು ದೊಡ್ಡ ದೇಶದ್ರೋಹಿ ಜಾಲಕ್ಕೆ ಕಡಿವಾಣ ಹಾಕಬೇಕೆಂದು ಜೆಡಿಎಸ್ ಪಕ್ಷದ ಮುಖಂಡ ಎನ್.ಆರ್‌. ಸಂತೋಷ್ ಆಗ್ರಹಿಸಿದರು. ಕೆಲ ದಿನಗಳ ಹಿಂದೆ ಹಾಸನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟದಲ್ಲೇ ಇರುವ ಆಧಾರ್ ನೋಂದಣಿ ಕೇಂದ್ರದಲ್ಲಿಯೇ ಬಾಂಗ್ಲಾದೇಶದ ವಲಸಿಗರಿಗೆ ನಕಲಿ ದಾಖಲೆ ಮೂಲಕ ಆಧಾರ್‌ ಕಾರ್ಡ್‌ ನೀಡುತ್ತಿರುವ ಬಗ್ಗೆ ಪತ್ತೆಯಾಗಿದೆ. ಪುಡಿಗಾಸಿನ ಆಸೆಗೆ ದೇಶದ್ರೋಹಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದರು.