ಬಾಂಗ್ಲಾ ವಿಮೋಚನೆಗೆ ಭಾರತ ಸೈನಿಕರ ತ್ಯಾಗ ಮಹೋನ್ನತ: ಜಿಲ್ಲಾಧಿಕಾರಿ
Dec 17 2023, 01:45 AM ISTಬಾಂಗ್ಲಾದ ವಿಮೋಚನೆಗಾಗಿ ನಮ್ಮ ಸೈನಿಕರು ಜೀವ ಮುಡಿಪಾಗಿರಿಸಿ ಹೋರಾಡಿ, ಬದುಕನ್ನೇ ತ್ಯಾಗ ಮಾಡಿರುವುದು ಅತ್ಯುನ್ನತವಾದ ತ್ಯಾಗ ಎಂದೇ ಪರಿಗಣಿಸಲಾಗುತ್ತದೆ. ಆ ಮೂಲಕ ಆ ದೇಶದ ಲಕ್ಷಾಂತರ ಮಂದಿಯ ರಕ್ಷಣೆಗೆ ನಮ್ಮ ಸೈನಿಕರು ಕಾರಣರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಕದ್ರಿಯ ವೀರ ಯೋಧರ ಸ್ಮಾರಕದಲ್ಲಿ ವಿಜಯ್ ದಿವಸ್ ಕಾರ್ಯಕ್ರಮ ನಡೆಯಿತು.