ಡಿಸ್ನಿಲ್ಯಾಂಡ್ ಯೋಜನೆ ಕೈಬಿಡುವಂತೆ ಬಿಜೆಪಿ ಮನವಿ
Aug 01 2024, 12:18 AM ISTರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್ ನಿರ್ಮಾಣ ಮಾಡ ಹೊರಟಿರುವುದು ಖಂಡನೀಯ. ಈ ವ್ಯಾಪ್ತಿಗೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಟಿ.ನರಸೀಪುರದ ೧೯ ಗ್ರಾಮಗಳು ಸೇರುತ್ತವೆ. ರಂಗನತಿಟ್ಟು ಕನ್ನಡಿಗರ ಹೆಮ್ಮೆ. ದೇಶ- ವಿದೇಶದಿಂದ ಸಾವಿರಾರು ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತವೆ. ಮಾತ್ರವಲ್ಲದೆ ಒಳ್ಳೆ ಪ್ರವಾಸಿ ತಾಣವು ಆಗಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ಅದಾಯವಿದೆ. ರೈತರು ಈ ಯೋಜನೆಯಿಂದ ತಮ್ಮ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.