ಡಾ. ಅಂಬೇಡ್ಕರಗೆ ಭಾರತ ರತ್ನ ನೀಡಿದ್ದು ಬಿಜೆಪಿ

Dec 07 2023, 01:15 AM IST
ಕನ್ನಡಪ್ರಭ ವಾರ್ತೆ ಗದಗ೬೦ ವರ್ಷ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದು ಅಧಿಕಾರ ನಡೆಸಿದ ಕಾಂಗ್ರೆಸ್ ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಅವರ ಸಹಾಯಕನನ್ನೇ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯನ್ನಾಗಿ ನಿಲ್ಲಿಸಿ ಡಾ. ಅಂಬೇಡ್ಕರ್‌ ಅವರನ್ನು ಸೋಲಿಸಿ ಅವಮಾನಗೊಳಿಸಿದ್ದು ಇತಿಹಾಸ ಎಂದು ಬಿಜೆಪಿ ಮುಖಂಡ ಡಾ. ಶೇಖರ ಸಜ್ಜನರ ಹೇಳಿದರು.ನಗರದ ನಗರಸಭೆ ಆವರಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಇತಿಹಾಸದ ಉದ್ದಕ್ಕೂ ಕಾಂಗ್ರೆಸಿಗರ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು. ಆದರೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಅವರು ನೆನಪಿಗೆ ಬರಲಿಲ್ಲ. ದೇಶ, ವಿದೇಶಗಳಲ್ಲಿ ೩೨ ಪದವಿಗಳನ್ನು ಗಳಿಸಿದ ಡಾ. ಅಂಬೇಡ್ಕರ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಅವರಿಗೆ ಗೌರವ ಸಲ್ಲಿಸಬೇಕಾಗಿತ್ತು