ತಾಲೂಕಿನ 1600 ರೈತರಿಗೆ ಬಾರದ ಬೆಳೆ ಪರಿಹಾರ
May 17 2024, 12:39 AM ISTಕನ್ನಡಪ್ರಭ ವಾರ್ತೆ ಜಮಖಂಡಿ ಜಮಖಂಡಿ ತಾಲೂಕಿನ ಸುಮಾರು1600 ರೈತರಿಗೆ ಕೇಂದ್ರ ಸರ್ಕಾರದ ಬೆಳೆ ಪರಿಹಾರದ ಹಣ ಬಂದಿಲ್ಲವೆಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು. ಕನ್ನಡಪ್ರಭ ದೊಂದಿಗೆ ಮಾತನಾಡಿದ ಅವರು, ಆಧಾರ್ ಕಾರ್ಡ್ ಲಿಂಕ್ ಇಲ್ಲದಿರುವ ಮತ್ತು ಖಾತೆ ಬದಲಾವಣೆ ಮಾಡಿದವರು, ಎಫ್ಐಡಿ ಸಂಖ್ಯೆ ನಮೂದು ಆಗದೇ ಇರುವ ರೈತರ ಖಾತೆಗಳಿಗೆ ಪರಿಹಾರ ಬಂದಿಲ್ಲ, ತಾಂತ್ರಿಕ ತೊಂದರೆ ಸರಿಪಡಿಸಿಕೊಂಡು ಪರಿಹಾರ ಪಡೆಯಬಹುದಾಗಿದೆ.