ಬೆಳೆ ನಷ್ಟ ಸಂಪೂರ್ಣ ಹಣ ಪರಿಹಾರವಾಗಿ ನೀಡಿ, ಅಥವಾ ಎಲ್ಲ ಬೆಳೆಗಳ ಸಾಲ ಮನ್ನಾಗೊಳಿಸಿಭಿಕ್ಷೆಯಂತೆ ಬೆಳೆ ಪರಿಹಾರ ನೀಡುತ್ತಿರುವ ಸರ್ಕಾರ: ಕುರುಬೂರು ಶಾಂತಕುಮಾರ್ ಆರೋಪ
May 29 2024, 12:59 AM ISTಬೆಳೆನಷ್ಟ ಪರಿಹಾರವನ್ನು ಸರ್ಕಾರ ಭಿಕ್ಷೆಯಂತೆ ನೀಡುತ್ತಿದ್ದು, ಬೆಳೆ ಪರಿಹಾರ ಹಣ ನೀಡುವುದನ್ನೇ ಮಂತ್ರಿಗಳಾದವರು ವೈಭವೀಕರಿಸಿ ಹೇಳುವ ಮೂಲಕ ಅನ್ನದಾತ ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ದಾವಣಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.