₹422 ಕೋಟಿ ಮೌಲ್ಯದ ಬೆಳೆ ಬರಗಾಲಕ್ಕೆ ತುತ್ತು!

Dec 06 2023, 01:15 AM IST
ಶೇ.85ರಷ್ಟು ಮೆಕ್ಕೆಜೋಳ ಬೆಳೆ ನಷ್ಟ: ಜಿಲ್ಲೆಯಲ್ಲಿ ಭತ್ತವನ್ನು ಬಿಟ್ಟರೆ ಮೆಕ್ಕೆಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ. ಈ ಬಾರಿ 48770 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮುಂಗಾರುಪೂರ್ವ ಹಾಗೂ ಮುಂಗಾರು ಮಳೆ ಕೊರತೆಯಿಂದಾಗಿ 44577 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ ಮಳೆ ಕೊರತೆಯಿಂದಾಗಿ ಶೇ.85ರಷ್ಟು ಮೆಕ್ಕೆಜೋಳ ಬೆಳೆ ನಷ್ಟವಾಗಿದೆ. ಬಿತ್ತನೆಯಾಗಿದ್ದ 44577 ಹೆಕ್ಟೇರ್‌ ಪೈಕಿ 38240 ಹೆಕ್ಟೇರ್‌ ಬೆಳೆ ಬರದಿಂದ ನಷ್ಟವಾಗಿದೆ. ಇದರಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ 16210 ಹೆಕ್ಟೇರ್‌, ಶಿವಮೊಗ್ಗ ತಾಲೂಕಿನಲ್ಲಿ 11420 ಹೆಕ್ಟೇರ್‌, ಸೊರಬ 7912 ಹೆಕ್ಟೇರ್‌, ಸಾಗರದಲ್ಲಿ 1723 ಹೆಕ್ಟೇರ್‌ ಪ್ರದೇಶದ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.