ಮಳೆಗೆ ಮಕಾಡೆ ಮಲಗಿದ ಭತ್ತದ ಬೆಳೆ
Nov 10 2023, 01:00 AM IST೩೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಈ ಬಾರಿ ನೀರು ಸಿಗುವ ಅನುಮಾನದಿಂದಲೇ ರೈತರು ನಾಟಿ ಮಾಡಿದ್ದರು. ನಂದ್ಯಾಲ ಸೋನಾ, ಕಾವೇರಿ ಸೋನಾ, ಸೋನಾ ಮಸೂರಿ ಸೇರಿದಂತೆ ಅತಿಹೆಚ್ಚು ಆರ್‌ಎನ್‌ಆರ್ ತಳಿಯನ್ನೇ ಬಿತ್ತನೆ ಮಾಡಿದ್ದರು. ಅಧಿಕ ಇಳುವರಿ ಬರುವ ಆರ್‌ಎನ್‌ಆರ್ ತಳಿಯ ಮೇಲೆ ನಂಬಿಕೆ ಇಟ್ಟ ರೈತರಿಗೆ ಭಾರಿ ಆಘಾತವಾಗಿದೆ. ಈ ಮಳೆಗೆ ಎಲ್ಲೆಡೆ ಆರ್‌ಎನ್‌ಆರ್ ಬೆಳೆಯೇ ನೆಲಕಚ್ಚಿದೆ.