ಪ್ರತಿ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಬೊಮ್ಮಾಯಿ
Jun 05 2024, 12:30 AM ISTಮತ ಎಣಿಕೆ ಸಂದರ್ಭದಲ್ಲಿ ಮೊದಲ ಸುತ್ತಿನಿಂದ ೨೦ನೇ ಸುತ್ತಿನವರೆಗೂ ನಿರಂತರವಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಮುನ್ನಡೆ ಕಾಯ್ದುಕೊಂಡರು. ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ನಡುವೆ ತೀವ್ರ ಜಿದ್ದಾಜಿದ್ದಿನಿಂದ ಸ್ಪರ್ಧೆ ಕಂಡುಬಂದರೂ ಒಮ್ಮೆಯೂ ಮುನ್ನಡೆ ಸಾಧಿಸುವಲ್ಲಿ ಆನಂದಸ್ವಾಮಿಗೆ ಸಾಧ್ಯವಾಗಲಿಲ್ಲ.