ತುಂಗಭದ್ರಾ ಆರತಿ ಪರಿಕಲ್ಪನೆ ಸಾಕಾರಕ್ಕೆ ವಚನಾನಂದ ಶ್ರೀ ಛಲ ಕಾರಣ: ಬೊಮ್ಮಾಯಿ
Aug 24 2024, 01:20 AM ISTಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಗಳ ಬದುಕಿಗೆ ನೀರು ಮತ್ತು ಗಾಳಿ ಅನಿವಾರ್ಯ. ನೀರು- ಗಾಳಿಗೆ ಪ್ರತೇಕ ವ್ಯವಸ್ಥೆ ಮಾಡಲಾಗುವುದಿಲ್ಲ. ಪ್ರತಿಯೊಬ್ಬರೂ ನೀರಿಗೆ ಮಹತ್ವ ಕೊಡುವುದನ್ನು ಕಲಿಯಬೇಕು. ಶ್ರೀಗಳು ನೀರಿನ ಮಹತ್ವ ಅರಿತಿರುವ ಕಾರಣ ತುಂಗಭದ್ರೆ ದಡದಲ್ಲಿ ಗಂಗಾರತಿಯಂತೆ ತುಂಗಭದ್ರಾರತಿ ಪರಿಕಲ್ಪನೆ ಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಹರಹರದಲ್ಲಿ ಹೇಳಿದ್ದಾರೆ.