ವಿಶ್ವಕ್ಕೆ ಭಾರತ ಪರಿಚಯಿಸಿದವರು ಗುರುದೇವ ರಾನಡೆ
Jul 04 2024, 01:03 AM ISTಕನ್ನಡಪ್ರಭ ವಾರ್ತೆ ಜಮಖಂಡಿ ವಿಶ್ವಕ್ಕೆ ಭಾರತವನ್ನು ಪರಿಚಯಿಸಿಕೊಟ್ಟವರು ಗುರುದೇವ ರಾನಡೆ ಎಂದು ಬೆಳಗಾವಿಯ ತತ್ವಶಾಸ್ತ್ರಜ್ಞ ಡಾ.ವೀರೇಶ್ವರ ಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದ ಪಿ.ಬಿ.ಹೈಸ್ಕೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗುರುದೇವ ರಾನಡೆ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರಾನಡೆಯವರು ತತ್ವಜ್ಞಾನಿಗಳು ಮತ್ತು ಅನುಭವಿಗಳು ಆಗಿದ್ದರಿಂದ ಅವರ ಮಾತುಗಳು ಪ್ರಭಾವ ಬೀರುತ್ತಿದ್ದವು.