ಭಾಷೆ ಸತ್ತರೆ ಒಂದು ಜನಾಂಗ ಸತ್ತಂತೆ: ಸಾಹಿತಿ ಮಲ್ಲಿಕಾರ್ಜುನ ಬನ್ನಿ
Jan 21 2024, 01:32 AM ISTಗುಳೇದಗುಡ್ಡ: ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಹಾಗೂ ಸಾವಿತ್ರಿಭಾಯಿ ಪುಲೆ ಶಿಕ್ಷಕಿಯರ ಸಂಘದ ಆಶ್ರಯದಲ್ಲಿ ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಸಭಾಭವನದಲ್ಲಿ ಶನಿವಾರ ಭಾಗೀರಥಿ ಆಲೂರ ಅವರ ನೆನಪಿನಂಗಳ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ನಶಿಸಿ ಹೋಗುತ್ತಿಲ್ಲ. ಬದಲಾಗಿಭಾಷೆ ಪ್ರಬುದ್ಧವಾಗಿ ಬೆಳೆಯುತ್ತಿದೆ. ಭಾಷೆ, ಭಾವನೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಸಾಹಿತಿ ಚಂದ್ರಶೇಖರ ಹೆಗಡೆ ಪುಸ್ತಕ ಅವಲೋಕನ ಮಾಡಿದರು.