ಅಂಗನವಾಡಿಗಳಲ್ಲಿ ದಾಖಲೆಯಲ್ಲಿರುವುದಕ್ಕಿಂತ ಕಡಿಮೆ ಮಕ್ಕಳು
Aug 15 2024, 01:46 AM ISTಜಿಲ್ಲೆಯಲ್ಲಿ ಒಟ್ಟು ೨,೬೯೧ ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ೩ ವರ್ಷದಿಂದ ೬ ವರ್ಷದೊಳಗಿನ ೬೯,೮೧೩ ಮಕ್ಕಳಿರುವುದಾಗಿ ದಾಖಲಾತಿಗಳಲ್ಲಿ ಲೆಕ್ಕ ಇದೆ. ಆದರೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದ್ದಿದ್ದು ಕಂಡುಬಂದಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದ್ದಾರೆ. ೨೪೭೫ ಅಂಗನವಾಡಿಗಳು ಶೌಚಾಲಯವನ್ನು ಹೊಂದಿದ್ದು ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯಗಳು ಇದ್ದು ಇಲ್ಲದಂತಿದ್ದು, ಬಳಸಲು ಅಯೋಗ್ಯವಾಗಿವೆ ಎನ್ನುವಷ್ಟರ ಮಟ್ಟಿಗೆ ಇವೆ. ೨೧೬ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯವೇ ಇಲ್ಲದೇ ಮಕ್ಕಳು ಮತ್ತು ಅಂಗನವಾಡಿ ಸಿಬ್ಬಂದಿ ಶೌಚ ಕ್ರಿಯೆಗಳಿಗೆ ಪರದಾಡುವಂತಾಗಿದೆ.