ಬೇಸಿಗೆ ಶಿಬಿರಗಳಿಂದ ಮಕ್ಕಳು ಕ್ರಿಯಾಶೀಲ: ಡಾ. ನಂಜಯ್ಯ
Apr 16 2024, 01:03 AM ISTಹಿಂದೆ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜ- ಅಜ್ಜಿಯರ ಮನೆಗೆ ಹೋಗುತ್ತಿದ್ದರು. ಅಲ್ಲಿ ಬೆಟ್ಟ ಗುಡ್ಡ ಕಣಿವೆ, ಜರಿ ತೊರೆಗಳಲ್ಲಿ ಆಡಿ ಸುಂದರ ಅನುಭವ ತಮ್ಮದಾಗಿಸಿಕೊಳ್ಳುತ್ತಿದ್ದರು. ಈ ಅನುಭವನ್ನು ಮಕ್ಕಳು ಕಳೆದುಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ನಗರ ಪ್ರದೇಶದಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿವೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಶಿಬಿರ ಆಯೋಜಿಸುತ್ತವೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಈ ಶಿಬಿರ ಆಯೋಜಿಸಿರುವುದು ಸಾರ್ಥಕ ಕಾರ್ಯ