ನಾಪತ್ತೆಯಾಗಿದ್ದ ಮೂರು ಮಕ್ಕಳು ಶವವಾಗಿ ಪತ್ತೆ
May 14 2024, 01:06 AM ISTಕನ್ನಡಪ್ರಭ ವಾರ್ತೆ ವಿಜಯಪುರ ಆಟವಾಡಲೆಂದು ನಗರದ ಗಚ್ಚಿನಕಟ್ಟಿ ಕಾಲೋನಿಯಿಂದ ಭಾನುವಾರ ಕಾಣೆಯಾಗಿದ್ದ ಮೂವರು ಮಕ್ಕಳು ಸೋಮವಾರ ಇಂಡಿ ರಸ್ತೆಯಲ್ಲಿರುವ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿವೆ.ನಗರದ ಗಚ್ಚಿನಕಟ್ಟಿ ಕಾಲೋನಿ ನಿವಾಸಿ ಮಿಹಿರ್ ಶ್ರೀಕಾಂತ ಜಾನಗೌಳಿ (7), ಗದಗ ನಿವಾಸಿಗಳಾದ ವಿಜಯ ಅನಿಲ ದಹಿಂಡೆ (8), ಅನುಷ್ಕಾ ಅನಿಲ ದಹಿಂಡೆ (10) ಮೃತಪಟ್ಟ ಮಕ್ಕಳು. ಭಾನುವಾರ ಸಂಜೆ ಕಾಲೋನಿಯಲ್ಲಿ ಒಂಟೆಗಳು ಬಂದಿದ್ದಾಗ ಅದರ ಹಿಂದೆ ಈ ಮೂವರು ಮಕ್ಕಳು ಆಟವಾಡುತ್ತ ಹೋಗಿದ್ದರು