ಸಮಸ್ಯೆಗಳಿಗೆ ಪರಿಹಾರ ಕೇಳಿದ ಶಾಲಾ ಮಕ್ಕಳು
Mar 11 2024, 01:18 AM ISTಕುದೂರು: ಶಾಲೆಗೆ ಹೋಗುವಾಗ, ಬರುವಾಗ ರಸ್ತೆಯಲ್ಲಿ ವಾಹನಗಳು ಅತ್ಯಂತ ವೇಗವಾಡಿ ಓಡಾಡುತ್ತವೆ, ದಯವಿಟ್ಟು ರಸ್ತೆ ಅಗಲೀಕರಣ ಮಾಡಿಸಿಕೊಡಿ, ನಮ್ಮದು ಉರ್ದು ಶಾಲೆ ನಮ್ಮ ಶಾಲೆಯ ಅಡುಗೆ ಮನೆ ತುಂಬಾ ಚಿಕ್ಕದು ದೊಡ್ಡದು ಮಾಡಿಕೊಡಿ, ಮಹಾತ್ಮನಗರ ಶಾಲೆ ಬಳಿ ಪುಂಡರು ಶಾಲೆ ಬಿಟ್ಟ ನಂತರ ಗುಟ್ಕಾ ಹಾಕಿ ಉಗಿದು, ಮದ್ಯಪಾನದ ಬಾಟೆಲ್ ಒಡೆದು, ಸಿಗರೇಟ್ ಸೇದಿ ಗಲೀಜು ಮಾಡ್ತಾರೆ. ಹಾಗೆ ಮಾಡುವವರನ್ನು ಹಿಡಿದು ಶಿಕ್ಷಿಸಿ... ಇಂತಹ ಹತ್ತಾರು ಸಮಸ್ಯೆಗಳಿಗೆ ಪಂಚಾಯ್ತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಪರಿಹಾರ ಕೇಳಿದವರು ಪ್ರಾಥಮಿಕ ಶಾಲೆಯ ಮಕ್ಕಳು.