ನರ್ಸರಿ ಉದ್ಯಮವನ್ನು ನಷ್ಟಕ್ಕೆ ತಳ್ಳಿದ ಮಳೆ
Aug 20 2025, 01:30 AM ISTಸಾಮಾನ್ಯವಾಗಿ ನರ್ಸರಿ ಉದ್ಯಮ ಆರಂಭವಾಗುವುದು ಏಪ್ರಿಲ್ ಮಧ್ಯಭಾಗದಿಂದ ಮೇ ಮಧ್ಯಭಾಗದ ನಡುವೆ. ನರ್ಸರಿ ಮಾಡಿದ ಗಿಡಗಳು ಮಣ್ಣಿಗೆ ಬೇರು ನೆಲಕಚ್ಚಲು ಒಂದೇರಡು ತಿಂಗಳ ಕಾಲವಕಾಶ ಬೇಕಾಗಿದೆ. ಆದರೆ, ಈ ಬಾರಿ ಅವಧಿಗೂ ಮೊದಲೇ ಮಳೆ ಆರಂಭವಾಗಿರುವುದರಿಂದ ನರ್ಸರಿಯಲ್ಲಿ ಗಿಡಗಳು ಬೇರುಗಟ್ಟುವ ಮುನ್ನ ಶೀತದಿಂದ ಕೊಳೆಯಲಾರಂಭಿಸಿದ್ದು, ಎಷ್ಟೇ ಮುಂಜಾಗ್ರತ ಕ್ರಮ ಕೈಗೊಂಡರೂ ನರ್ಸರಿ ಉಳಿಸಿಕೊಳ್ಳಲು ಸಾಕಷ್ಟು ನರ್ಸರಿ ಮಾಲೀಕರಿಗೆ ಸಾಧ್ಯವಾಗಿಲ್ಲ.