20 ನಿಮಿಷ ಸುರಿದ ಮಳೆ: ಸವಾರರ ಹೈರಾಣು
Aug 20 2024, 12:54 AM ISTನಗರದಲ್ಲಿ ಸೋಮವಾರ ಮಧ್ಯಾಹ್ನ ಅಲ್ಪಕಾಲ ಸುರಿದ ಧಾರಾಕಾರವಾಗಿ ಮಳೆಯಿಂದ ನಗರದ ರಸ್ತೆಗಳು ಅಕ್ಷರಶಃ ನದಿಗಳಂತೆ ತುಂಬಿ ಹರಿದ ಪರಿಣಾಮ ಹಲವು ಕಡೆ ವಾಹನ ಸಂಚಾರದಲ್ಲಿ ದಟ್ಟಣೆ ಉಂಟಾಯಿತು. ಬೆಳಗ್ಗೆ ನಗರದಲ್ಲಿ ಬಿಸಿಲ ವಾತಾವರಣ ಕಂಡು ಬಂತಾದರೂ. ಮಧ್ಯಾಹ್ನ 12 ಗಂಟೆಯ ನಂತರ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮೂರು ಗಂಟೆಯ ಸುಮಾರಿಗೆ ಮೆಜಸ್ಟಿಕ್, ಗಾಂಧಿನಗರ, ವಿಧಾನಸೌಧ, ಸದಾಶಿವನಗರ ಸೇರಿದಂತೆ ಮೊದಲಾದ ಸ್ಥಳದಲ್ಲಿ ಧಾರಾಕಾರವಾಗಿ ಮಳೆಯಿತು.