ಅನಧಿಕೃತ ಪಟಾಕಿ ಮಾರಾಟ, ದಾಸ್ತಾನಿಗೆ ಕಡಿವಾಣ ಹಾಕಿ
Oct 13 2023, 12:15 AM ISTಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ಪಟಾಕಿಗಳ ಸಂಗ್ರಹ, ಸಾಗಾಣಿಕೆ, ತಯಾರಿಕೆ ಹಾಗೂ ಮಾರಾಟ ಮಾಡುವ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಇಂತಹ ಚಟುವಟಿಕೆಗಳ ಪತ್ತೆಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.