ದೆಹಲಿ ಮೆಟ್ರೋದಂತೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಮತ್ತೊಮ್ಮೆ ವಿವಾದ ತಲೆದೂರಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಯುವ ಜೋಡಿಯೊಂದು ಎಲ್ಲರೆದುರು ತೋರಿದ ಸಲ್ಲಾಪ ವರ್ತನೆಗೆ ಬಹಳಷ್ಟು ಪ್ರಯಾಣಿಕರು, ನೆಟ್ಟಿಗರು ಕೆಂಗಣ್ಣು ಬೀರಿದ್ದರೆ, ಇನ್ನೊಂದಿಷ್ಟು ಜನ ಸಮರ್ಥಿಸಿಕೊಂಡಿದ್ದಾರೆ.
ರೈಲು ಕಾರ್ಯಾಚರಣೆ ಹೊರತುಪಡಿಸಿ ಇನ್ನಿತರ ಮೂಲಗಳಿಂದ ಆದಾಯ ಗಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ, ಮೆಟ್ರೋ ನಿಲ್ದಾಣಗಳಿಗೆ ಕಡಿಮೆ ಅವಧಿಗೆ ಕಾರ್ಪೋರೆಟ್ ಕಂಪನಿಗಳ ನಾಮಕರಣ ಮಾಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಿದೆ.
ಏ.26ರ ಶುಕ್ರವಾರ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಚಾರದ ಅವಧಿಯನ್ನು ಮಧ್ಯರಾತ್ರಿ 11.55ರವರೆಗೆ ವಿಸ್ತರಣೆ ಮಾಡಲಾಗಿದೆ