ಟಿಪ್ಪು ಬಳಿಕ 2ನೇ ಅವತಾರವೇ ಸಿದ್ದರಾಮಯ್ಯ: ಶಾಸಕ ಯತ್ನಾಳ
Dec 24 2023, 01:45 AM ISTವಿಜಯಪುರ: ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಉದ್ಧಟತನ. ಟಿಪ್ಪು ನಂತರ ಎರಡನೇ ಅವತಾರವೇ ಸಿದ್ದರಾಮಯ್ಯ. ಇವರು ಟಿಪ್ಪು ಪಾರ್ಟ್-2 ಇದ್ದಂತೆ. ಇವರದ್ದು ಅತಿರೇಕವಾಯ್ತು, ಅಂತ್ಯಕಾಲ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ಕುರಿತ ಹೇಳಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳ ನಡೆಸಿದರು.