ಯತ್ನಾಳ ಗ್ರಾಮದ ಜೋಡೆತ್ತಿನ ರೈತರ ನಂದಿ ಯಾತ್ರೆ ಯಶಸ್ವಿ
Mar 08 2024, 01:53 AM ISTವಿಜಯಪುರ: ನಾಶವಾಗುತ್ತಿರುವ ಎತ್ತುಗಳ ಸಂತತಿಯನ್ನು ಉಳಿಸಬೇಕಾದ ಸಂದೇಶ ಹೊತ್ತು ಯತ್ನಾಳ ಗ್ರಾಮದ ರೈತರು ಸಿದ್ದೇಶ್ವರ ಸ್ವಾಮೀಜಿಯವರ ಜೋಡೆತ್ತಿನ ಬಂಡಿಯ ನಂದಿ ರಥಯಾತ್ರೆ ಹಮ್ಮಿಕೊಂಡಿದ್ದು, ರಥ ಮರಳಿ ಗ್ರಾಮ ತಲುಪಿದೆ. ಸುಮಾರು 200 ಕಿ.ಮೀ 11 ಜೋಡೆತ್ತಿನ ಬಂಡೆಗಳೊಂದಿಗೆ 7 ದಿನಗಳ ಕಾಲ ಸಿಂದಗಿ ಮತಕ್ಷೇತ್ರದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಾದ ತಾಂಬಾ, ಬಂಥನಾಳ, ಚಾಂದಕವಟಗಿ, ಸಿಂದಗಿ ಹಾಗೂ ಕನ್ನೊಳ್ಳಿ ಗ್ರಾಮಗಳಿಗೆ ತರಳಿ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿ ಮರಳಿ ಗ್ರಾಮಕ್ಕೆ ಆಗಮಿಸಿದೆ.