ಯಶಸ್ಸು ತಂದ 15 ಅಂಶಗಳ ಕ್ರಿಯಾ ಯೋಜನೆ
May 10 2024, 01:36 AM ISTಫಲಿತಾಂಶದಲ್ಲಿ ತಳಮಟ್ಟ ಕಂಡಿರುವ ಜಿಲ್ಲೆಯನ್ನು 10ರೊಳಗಿನ ಸ್ಥಾನಕ್ಕೆ ತರಲು ನಿರಂತರ ಕಲಿಕೆ, ಗುಣಮಟ್ಟದ ಶಿಕ್ಷಣ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮುಂದಾಗಿತ್ತು. ಜಿಲ್ಲೆಯಲ್ಲಿ ಕೆಲ ವರ್ಷದಿಂದ ಫಲಿತಾಂಶ ಕುಸಿತಕ್ಕೆ ಕಾರಣಗಳನ್ನು ಆಲೋಚಿಸಿದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಶಿಕ್ಷಣ ಕ್ಷೇತ್ರದಲ್ಲಿ ಫಲಿತಾಂಶ ಸುಧಾರಣೆಗೆ 15 ಅಂಶಗಳ ಸೂತ್ರಗಳ ಯೋಜನೆ ಸಿದ್ದಪಡಿಸಿ, ಅವುಗಳನ್ನು ಯಥಾವತ್ತು ಜಾರಿಗೆ ತಂದಿತ್ತು.