ಬೀದರ್: ರಸ್ತೆ ಬದಿ ಅತಿಕ್ರಮಣ ತೆರವಿಗೆ ಚುರುಕು
Jul 03 2024, 12:16 AM ISTಸಂಚಾರ ದಟ್ಟಣೆ, ಪಾದಚಾರಿಗಳಿಗೆ ಕಿರಿ ಕಿರಿ ಹಿನ್ನೆಲೆ ನಗರಸಭೆಯಿಂದ ರಸ್ತೆ ಅತಿಕ್ರಮಿತ ಶೆಡ್, ಠಿಕಾಣಿ ಹೂಡಿದ ಬಂಡಿಗಳ ತೆರವು. ನಗರದ ಗುಂಪಾ ರಸ್ತೆ, ಮೈಲೂರು ರಸ್ತೆ, ಉದಗೀರ್ ರಸ್ತೆ (ಪಾಪನಾಶ ವರೆಗೆ), ಚಿದ್ರಿ ವೃತ್ತದ ಮಾರ್ಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದ್ದು ಇನ್ನು ನೌಬಾದ್ ಪ್ರದೇಶ ಹಾಗೂ ಓಲ್ಡ್ ಸಿಟಿಯಲ್ಲಿನ ಅತಿಕ್ರಮಣ ತೆರವು ಬಾಕಿಯಿದೆ ಎಂದು ನಗರಸಭೆ ಆಯುಕ್ತರಾದ ಶಿವರಾಜ ರಾಠೋಡ್ ಕನ್ನಡಪ್ರಭಕ್ಕೆ ಮಾತನಾಡಿ ತಿಳಿಸಿದ್ದಾರೆ.